ಸುರ್ಭಿ ಜ್ಯೋತಿ(೨೯ ಮೇ ೧೯೮೮) ರವರು ಭಾರತೀಯ ದೂರದರ್ಶನ ನಟಿ. ಇವರು ಕುಬೂಲ್ ಹೆ ಧಾರವಾಹಿಯಲ್ಲಿ ಜ಼ೋಯಾ ಹಾಗೂ ನಾಗಿನ್ ೩ ಧಾರಾವಾಹಿಯಲ್ಲಿ ಬೇಲಾ/ಶ್ರಾವಣಿ ಎಂಬ ಪಾತ್ರವನ್ನು ವಹಿಸಿ ನಟಿಸಿದಕ್ಕೆ ಪ್ರಸಿದ್ಧಿ ಹೊಂದಿದ್ದಾರೆ. ಅವರು ರೇಡಿಯೋ ಜಾಕಿಯಾಗಿಯೂ ಕೆಲಸ ಮಾಡಿದ್ದಾರೆ. ಅವರು ಪಂಜಾಬಿ ಭಾಷೆಯ ಚಲನಚಿತ್ರಗಳಾದ ಇಕ್ ಕುಡಿ ಪಂಜಾಬ್ ದಿ, ರೌಲಾ ಪೈ ಗಯಾ ಮತ್ತು ಮುಂಡೆ ಪಟಿಯಾಲಾ ದಿ ಮತ್ತು ಪಂಜಾಬಿ ದೂರದರ್ಶನ ಸರಣಿಯ ಅಖಿಯಾನ್ ತು ದೂರ್ ಜಾಯೆನಾ ಮತ್ತು ಕಚ್ ದಯಾನ್ ವಂಗಾದಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತವಾಗಿ ಇವರು ಯೆ ಜಾದು ಹೆ ಜಿನ್ ಕಾ ಧಾರವಾಹಿಯಲ್ಲಿ ಚಾಂದ್ ನಿ ಮತ್ತು ಲೈಲಾ ಎಂಬ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ . == ಜನನ , ಆರಂಭಿಕ ಜೀವನ ಮತ್ತು ಶಿಕ್ಷಣ == ಸುರ್ಭಿ ಜ್ಯೋತಿ ರವರು ೨೯ ಮೇ ೧೯೮೮ ರಂದು ಪಂಜಾಬ್ ನ ಜಲಂಧರ್ ನಲ್ಲಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಜ್ಯೋತಿ ಪಬ್ಲಿಕ್ ಸ್ಕೂಲ್ ನಿಂದ ಪಡೆದರು ಹಾಗೂ ತಮ್ಮ ಪದವಿ ಶಿಕ್ಷಣವನ್ನು ಹನ್ಸ್ ರಾಜ್ ಮಹಿಳಾ ಮಹಾವಿದ್ಯಾಲಯದಿಂದ ಪಡೆದರು . ಅಪೀಜೆ ಕಾಲೇಜ್ ಆಫ್ ಫೈನ್ ಆರ್ಟ್ಸ್ ನಿಂದ ಅವರು ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. == ವೃತ್ತಿಜೀವನ == ಪ್ರಾದೇಶಿಕ ರಂಗಭೂಮಿ ಮತ್ತು ಚಲನಚಿತ್ರಗಳೊಂದಿಗೆ ಜ್ಯೋತಿ ಯವರು ತಮ್ಮ ವೃತ್ತಿಜೀವನಕ್ಕೆ ಕಾಲಿಟ್ಟರು . ೨೦೧೨ ರ ಕೊನೆಯಲ್ಲಿ, ಜ್ಯೋತಿಯವರು 4 ಲಯನ್ಸ್ ಫಿಲ್ಮ್ಸ್ ನಿರ್ಮಿಸಿದ ಮತ್ತು ಝೀ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕುಬೂಲ್ ಹೈ ಎಂಬ ಕಿರುತೆರೆ ಪ್ರದರ್ಶನಕ್ಕೆ ಸೇರಿಕೊಂಡರು. ಅದರಲ್ಲಿ ಅವರು ಜ಼ೋಯಾ ಫಾರುಖೀ ಎಂಬ ಪಾತ್ರವನ್ನು ನಿರ್ವಹಿಸಿದರು. ಆ ಪಾತ್ರವನ್ನು ನಿರ್ವಹಿಸಿದಕ್ಕಾಗಿ ಅವರು GR8 ಪ್ರಶಸ್ತಿಯನ್ನು ಗೆದ್ದರು. ೨೦೧೪ ರ, "ಕುಬೂಲ್ ಹೆ" ಎಂಬ ಧಾರಾವಾಹಿಯಲ್ಲಿ ಅವರು ಸನಮ್ ಮತ್ತು ಸೆಹೆರ್ ಎಂಬ ದ್ವಿ ಪಾತ್ರವನ್ನು ನಿರ್ವಹಿಸಿದರು. ಗೋಲ್ಡ್ ಅವಾರ್ಡ್ಸ್ ೨೦೧೫ ರಲ್ಲಿ, ಕರಣ್ವೀರ್ ಬೊಹ್ರಾ ಮತ್ತು ಜ್ಯೋತಿ ಅವರಿಗೆ ಅತ್ಯುತ್ತಮ ತೆರೆಯ ಜೋಡಿ ಪ್ರಶಸ್ತಿ ನೀಡಲಾಯಿತು. ೨೦೧೫ ರಲ್ಲಿ, ಕುಬೂಲ್ ಹೈ ಕಾರ್ಯಕ್ರಮದಲ್ಲಿ ಅವರು ಮಹಿರಾ ಪಾತ್ರವನ್ನು ನಿರ್ವಹಿಸಿದರು, ಈ ಪ್ರದರ್ಶನದಲ್ಲಿ ಅವರ ಐದನೇ ಪಾತ್ರ. ಅದೇ ವರ್ಷದಲ್ಲಿ ಯುಕೆ ಮೂಲದ ವಾರಪತ್ರಿಕೆ ಈಸ್ಟರ್ನ್ ಐ ನಡೆಸಿದ ವಾರ್ಷಿಕ ಸಮೀಕ್ಷೆಯಲ್ಲಿ ಅವರು ೧೭೦ನೇ ಸ್ಥಾನ ಪಡೆದರು.ಕುಬೂಲ್ ಹೈ ಧಾರವಾಹಿಯು ಜನವರಿ ೨೦೧೬ ರಲ್ಲಿ ಕೊನೆಗೊಂಡಿತು. ೨೦೧೬ ರಲ್ಲಿ ಅವರು ಸುರ್ಬಿ ಚಂದ್ನಾ ಮತ್ತು ನಕುಲ್ ಮೆಹ್ತಾ ಅವರ ಪ್ರದರ್ಶನ ಇಶ್ಕ್ಬಾಜ್ ನಲ್ಲಿ ಶಲೀನ್ ಮಲ್ಹೋತ್ರಾ ಎದುರು ಅತಿಥಿ ಪಾತ್ರದಲ್ಲಿ ಮಲ್ಲಿಕಾ ಕಬೀರ್ ಚೌಧರಿ ಪಾತ್ರದಲ್ಲಿದ್ದರು. ಸೆಪ್ಟೆಂಬರ್೨೦೧೬ ರಲ್ಲಿ, ಅವರು ಮತ್ತೊಂದು ಪ್ರಯಾಣ ಆಧಾರಿತ ವೆಬ್ ಶೋ ದೇಸಿ ಎಕ್ಸ್‌ಪ್ಲೋರರ್ಸ್ ಯಾಸ್ ದ್ವೀಪವನ್ನು ಇತರ ಅನೇಕ ದೂರದರ್ಶನ ನಟರೊಂದಿಗೆ ಆಯೋಜಿಸಿದರು. ೨೦೧೪ ರಲ್ಲಿ, ಯುಕೆ ಮೂಲದ ವಾರ್ತಾ ಪತ್ರಿಕೆಯಾದ ಈಸ್ಟರ್ನ್ ಐ ನಡೆಸಿದ ವಾರ್ಷಿಕ ಸಮೀಕ್ಷೆಯಲ್ಲಿ ಅವರು ೧೬ ನೇ ಸ್ಥಾನ ಪಡೆದಿದ್ದಾರೆ. ೨೦೧೫ ರಲ್ಲಿ ಮಿಯಾಂಗ್ ಚ್ಯಾಂಗ್ ರವರ ಜೊತೆ ಪ್ರೇಮ ನಾಟಕವಾದ ಪ್ಯಾರ್ ತೂನೆ ಕ್ಯಾ ಕಿಯಾ ದ ಮೂರು ಋತುಗಳಲ್ಲಿಯೂ ಅವರು ನಿರೂಪಕಿಯಾಗಿ ಕೆಲಸ ಮಾಡಿದರು. ಜೂನ್ ೨೦೧೮ ರಲ್ಲಿ ಜ್ಯೋತಿಯವರು ಬಾಲಾಜಿ ಟೆಲಿ ಫಿಲ್ಮ್ಸ್ ನ ನಾಗಿನ್ ೩ ಧಾರವಾಹಿಗೆ ಸೇರಿಕೊಂಡರು. ಇದು ಕಲರ್ಸ್ ಚಾನೆಲ್ ನಲ್ಲಿ ಪ್ರಸಾರವಾಯಿತು. ಪ್ರದರ್ಶನವು ಹೆಚ್ಚಿನ ಟಿಆರ್ಪಿಗಳನ್ನು ಪಡೆಯಿತು ಮತ್ತು ಮೇ ೨೦೧೯ ರಲ್ಲಿ ಕೊನೆಗೊಂಡಿತು. == ಫಿಲ್ಮೋಗ್ರಾಫಿ == == ದೂರದರ್ಶನ == === ವೆಬ್ ಪ್ರದರ್ಶನಗಳು === == ಮ್ಯೂಸಿಕ್ ವೀಡಿಯೋ == == ನಾಮನಿರ್ದೇಶನ ಮತ್ತು ಪ್ರಶಸ್ತಿಗಳು == == ಗ್ಯಾಲರಿ == == ಉಲ್ಲೇಖಗಳು ==